InterNICHE



  About InterNICHE
  News
  Alternatives
  Conscientious Objection
  Resources
  How you can help
  Sponsors
  Site Map
  Links
  HOME

Introduction in other languages


 



InterNICHE Co-ordinator
Nick Jukes
42 South Knighton Road 
Leicester LE2 3LP 
England 

Tel/Fax +44 116 2109652

coordinator@interniche.org



 Introduction - Kannada

 

ಪ್ರಾಣಿಗಳ ಮೇಲೆ ಪ್ರಯೋಗಗಳು ನಿಮಗೇನು ಕಲಿಸುತ್ತವೆ ಎಂದು ನೀವು ಅಂದುಕೊಂಡಿದ್ದೀರಿ?

ಶಿಕ್ಷಣ ಮತ್ತು ತರಬೇತಿಗಳಲ್ಲಿ ಸಿಗಿದು ನೋಡಲು ಮತ್ತು ಪ್ರಯೋಗಗಳಿಗಾಗಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಸಕಾರಣ ಇಲ್ಲ. ಪ್ರಾಣಿಗಳಿಗೆ ಹಾನಿ ಮಾಡದ ಆಧುನಿಕ ಮತ್ತು ಸೃಜನಶೀಲವಾದ ಹಲವು ವಿಧಾನಗಳು ಇಂದು ಅಸ್ಥಿತ್ವದಲ್ಲಿವೆ, ಮತ್ತು ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಇದು ಇಂದು ನಿಯಮವಾಗಿದೆ.

ಪ್ರಾಣಿಗಳನ್ನು ಹಾನಿಕರವಾಗಿ ಬಳಸಿಕೊಳ್ಳದ ನೈತಿಕವಾದ ಶಿಕ್ಷಣದಲ್ಲಿ ಹೆಚ್ಚು ಪರಿಣಾಮಕಾರಿಯಾದ ಮತ್ತು ಶಿಕ್ಷಣದ ಉದ್ದೇಶಗಳಿಗೆ ಹೆಚ್ಚು ಪ್ರಸ್ತುತವಾದ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವು ಮಿಥ್ಯಾ ಸಿಗಿಯುವಿಕೆಗಳು (virtual dissections) ಪರದೆಯ ಮೇಲೆ ಕಾಣುವ ಪ್ರಯೋಗಾಲಯಗಳಿಂದ ಆರಂಭಿಸಿ ಸಂಪೂರ್ಣ ತೊಡಗಿಕೊಳ್ಳಬೇಕಾಗುವ ಮಿಥ್ಯಾ ಪ್ರೇರಣೆಗಳ ಸಹಿತ ಕ್ಲಿನಿಕಲ್ ಕಾರ್ಯವಿಧಾನಗಳ (fully immersive virtual reality simulations of clinical procedures) ತನಕ ಅಸಂಖ್ಯ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿರಿಸಿದೆ. ಆಧುನಿಕ ವೈದ್ಯಕೀಯ ಕೌಶಲ ಮತ್ತು ಶಸ್ತ್ರಕ್ರಿಯಾ ತರಬೇತಿಯ ಸಾಧನಗಳಲ್ಲಿ ಸೂಕ್ಷ್ಮ ಶಸ್ತ್ರಕ್ರಿಯಾ ಮಾದರಿಗಳು (microsurgery models) ಮತ್ತು ತೀರಾ ವಾಸ್ತವವೆನ್ನಿಸಬಲ್ಲ ಕೃತಕ ಅಂಗಾಂಗಗಳು ಮತ್ತು ಪ್ರತಿಕ್ರಿಯಾ ಮೆಕ್ಯಾನಿಸಂಗಳನ್ನು ಹೊಂದಿರುವ ಮಾನವ ದೇಹದ ಮಾದರಿಗಳು ಒಳಗೊಂಡಿವೆ. ಇತರ ವಿಧಾನಗಳು ಸ್ವಯಂ ಸೇವಕ ವಿದ್ಯಾರ್ಥಿಗಳ ಮೇಲೆ ಸ್ವಯಂ-ಪ್ರಯೋಗ, ಕಂಪ್ಯೂಟರ್ –ಸಂಪರ್ಕಿತ ಪ್ರಯೋಗ ಸಾಧನಗಳನ್ನು ಬಳಸಿ ನರ/ಸ್ನಾಯು ಪ್ರೇರಣೆಗಳನ್ನು ಆಧರಿಸಿವೆ.

ನೈತಿಕವಾದ ಶಿಕ್ಷಣದಲ್ಲಿ ಪ್ರಾಣಿಗಳೂ ಒಳಗೊಂಡಿರಬಹುದು. ಪಶು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ನುರಿತ ಸಹೋದ್ಯೋಗಿಗಳಿಗೆ ನಿಜ ರೋಗಿಗಳೊಂದಿಗೆ ವ್ಯವಹರಿಸುವ ವೇಳೆ ವೈದ್ಯಕೀಯ ಕೆಲಸಗಳಲ್ಲಿ ಸಹಕರಿಸುವಾಗ, ರೋಗಿಗಳ ಆರೈಕೆ ಮತ್ತು ಜೀವಕ್ಕೆ ಗೌರವ ಸಹಿತ ವಿಸ್ತ್ರತ ಶ್ರೇಣಿಯ ವೈದ್ಯಕೀಯ ಕೌಶಲಗಳನ್ನು ಕಲಿಯುತ್ತಾರೆ – ಇದಕ್ಕೆ ವಿರುದ್ಧವಾಗಿ, ಪ್ರಾಣಿಗಳ ಮೇಲೆ ಪ್ರಯೋಗಗಳ ವೇಳೆ ಅವರಿಗೆ ಪ್ರಾಣಿಗಳು ಬಳಸಿ ಎಸೆಯಲಾಗುವ ಪರಿಕರಗಳೆಂದೇ ಕಲಿಸಲಾಗಿರುತ್ತದೆ. ಜೀವ ವಿಜ್ಞಾನದ ವಿದ್ಯಾರ್ಥಿಗಳು ಪ್ರಾಣಿಗಳ ಬಗ್ಗೆ ಅವುಗಳ ಸಹಜ ಬದುಕಿನ ಸ್ಥಳದಲ್ಲೇ ಹಸ್ತಕ್ಷೇಪ ರಹಿತ ವಿಧಾನಗಳನ್ನು ಬಳಸಿ ಕಲಿಯುವಾಗ, ಪ್ರಾಣಿ ವರ್ತನೆಗಳ ಬಗ್ಗೆ ಪ್ರಯೋಗಾಲಯದಲ್ಲಿ ಪ್ರಾಣಿಪ್ರಯೋಗಗಳಿಂದ ಕಲಿಯುವುದಕ್ಕಿಂತ ಬಹಳ ಹೆಚ್ಚಿನದನ್ನು ಕಲಿತಿರುತ್ತಾರೆ. ದಾನವಾಗಿ ದೊರೆತ ಮಾನವ ಮೃತದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಸಿಗಿಯಲು ಬಳಸುವಂತೆ, ಪಶು ವೈದ್ಯಕೀಯ ಮತ್ತು ಜೀವ ವಿಜ್ಞಾನದ ವಿದ್ಯಾರ್ಥಿಗಳು ರೋಗ ಅಥವಾ ಜಖಂಗಳಿಂದ ಮೃತಪಟ್ಟ ಪ್ರಾಣಿಗಳನ್ನು ನೈತಿಕವಾಗಿ ಸಿಗಿದು ನೋಡಲು ಬಳಸಬಹುದಾಗಿದೆ.

ಮೃತ ಪ್ರಾಣಿಗಳು ಮತ್ತು ಪ್ರಾಣಿಗಳ ಮೇಲೆ ಪ್ರಯೋಗದಿಂದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿಗೊಳಗಾಗುತ್ತಿರುವವರಿಗೆ ಒಂದು ವಿಷಯದ ಮೇಲೆ ನೈತಿಕ ವಿಧಾನಗಳ ಸಾಮರ್ಥ್ಯಕ್ಕೆ ಹೋಲಿಸಿದರೆ ಹೆಚ್ಚಿನ ಮಾಹಿತಿಗಳೇನೂ ದೊರಕಲಾರವು. ಆದರೆ, ಪ್ರಾಣಿಗಳ ಬದುಕು ಮುಖ್ಯವಲ್ಲ ಎಂಬ ಮನೋಭಾವವನ್ನು ನಿಮ್ಮ ಮೇಲೆ ಹೇರುತ್ತಿರುವುದು ಪ್ರಾಣಿಗಳ ಮೇಲಿನ ಪ್ರಯೋಗಗಳು ಮಾತ್ರ. ಜೀವಂತವಾಗಿರುವ ಜೀವಿಗಳನ್ನು ಬಳಸಿ ಎಸೆಯಬಹುದೆಂದು ಕಲಿತಿರುವ ಪಶುವೈದ್ಯಕೀಯ ತಜ್ಞರು, ಸಂಶೋಧಕರು ಮತ್ತು ವೈದ್ಯರು ನಮಗೆ ಅಗತ್ಯವೇ? ಪ್ರಾಣಿಗಳನ್ನು ನಿಸರ್ಗದಿಂದ ತಂದು, ಅಥವಾ ಸಣ್ಣ ಗೂಡುಗಳಲ್ಲಿ ಅವುಗಳ ಜೀವನ ಪರ್ಯಂತ ಕೂಡಿಹಾಕಬೇಕೆ, ಅವಕ್ಕೆ ತಮ್ಮ ಗುಣವನ್ನು ವ್ಯಕ್ತಪಡಿಸುವ ಅವಕಾಶವನ್ನು ಎಂದೂ ನೀಡಬಾರದೆ, ಅವು ತಮ್ಮ ಜೀವನವನ್ನು ಕೇವಲ ಸಿಗಿದು ಹಾಕುವ ಟ್ರೇಯಲ್ಲಿ ಅಂತ್ಯಗೊಳಿಸಿಕೊಳ್ಳಬೇಕೆ ಅಥವಾ ಹಸ್ತಕ್ಷೇಪ ಸಹಿತ ಪ್ರಯೋಗಗಳಲ್ಲಿ ಪಾಲ್ಗೊಳ್ಳಲು ಸಿದ್ಧಗೊಳ್ಳಬೇಕೆ?

ಅಭಿವೃದ್ಧಿಶೀಲ, ಪರ್ಯಾಯ ವಿಧಾನಗಳ ಪರಿಣಾಮಕಾರಿ ಬಳಕೆಯಿಂದ ಜ್ಞಾನ, ಕೌಶಲಗಳು ಮತ್ತು ನೈತಿಕ ಅರಿವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗಳಿಸಿಕೊಳ್ಳಬಹುದೆಂದು ಪ್ರಕಟಿತ ಅಧ್ಯಯನಗಳು ತೋರಿಸಿಕೊಟ್ಟಿವೆ. ತಮ್ಮ ನೈತಿಕ ನಂಬಿಕೆಗಳನ್ನು ಉಲ್ಲಂಘಿಸಲು ಬಲವಂತಕ್ಕೊಳಗಾಗುವ ಬದಲು, ವಿದ್ಯಾರ್ಥಿಗಳು ಮತ್ತು ತರಬೇತಿಗೊಳಗಾಗುವವರು ಪ್ರಾಣಿಗಳ ಹಾನಿಕರ ಬಳಕೆಗೆ ಬದಲಾಗಿ ಉತ್ತಮ ಕಲಿಕೆಯ ಪರಿಸರವನ್ನು ಖುಷಿಪಡಬಹುದು. ಈ ಬದಲಾವಣೆಯನ್ನು ತರುವ ಶಕ್ತಿ ನಿಮಗಿದೆ. ಪ್ರಾಣಿಗಳ ಹಾನಿಕರ ಬಳಕೆಯನ್ನು ತಡೆಗಟ್ಟುವಲ್ಲಿ ಸಹಾಯಕ್ಕಾಗಿ ಇಂಟರ್ ನಿಷೆ (InterNICHE) ಸಂಪರ್ಕಿಸಿ. ನೈತಿಕವಾದ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಿ!

News release
Other languages


 About InterNICHE
 News
 Resources
 Alternatives
 Conscientious
   Objection

 How you can help
 Sponsors
 Site Map
 Links
 HOME
o